Descripción de Mukta Mukta Title song:
" ಮುಕ್ತ ಮುಕ್ತ " ಧಾರಾವಾಹಿಯ ಶೀರ್ಷಿಕೆ ಗೀತೆ ರಚನೆ : ಹೆಚ್. ಎಸ್.ವೆ೦ಕಟೇಶಮೂರ್ತಿ ಮಣ್ಣ ತಿ೦ದು ಸಿಹಿ ಹಣ್ಣ ಕೊಡುವ ಮರ, ನೀಡಿ ನೀಡಿ ಮುಕ್ತ ಬೇವ ಅಗಿವ ಸವಿಗಾನದ ಹಕ್ಕಿ, ಹಾಡಿ ಹಾಡಿ ಮುಕ್ತ . ಹಸಿರ ತೋಳಿನಲಿ ಬೆ೦ಕಿಯ ಕೂಸ, ಪೊರೆವುದು ತಾಯಿಯ ಹೃದಯ ಮರೆಯುವುದು೦ಟೆ, ಮರೆಯಲಿ ನಿ೦ತೆ, ಕಾಯುವ ಕರುಣಾಮಯಿಯ. ತನ್ನಾವರಣವೇ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ, ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ. ಹೂ ಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೇ ನಿನ್ನಾಟ ಬೆಳಕಿನ ಕೂಸಿಗೆ ಕೆ೦ಡದ ಹಾಸಿಗೆ, ಕಲಿಸಿದೆ ಜೀವನ ಪಾಠ. ಇರುಳ ವಿರುದ್ದ ಬೆಳಕಿನ ಯುದ್ಧ, ಕೊನೆಯಿಲ್ಲದ ಕಾದಾಟ, ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ.
Vijay Prakash - Mukta Mukta Title Song Solo - www.vijay-prakash.com
03:58 Mins | Visto 6195 veces
Kannada Patriotic Song by H.S Venkatesh Murthy & Ricky Kej !!
03:53 Mins | Visto 3599 veces